ಬಾಂಗ್ಲಾದೇಶ ವಾಯುಪಡೆಯ ತರಬೇತಿ ವಿಮಾನ ಢಾಕಾದಲ್ಲಿ ಪತನಗೊಂಡಿದೆ. ಢಾಕಾದಲ್ಲಿ ಅಪಘಾತ ಸಂಭವಿಸಿದೆ. ಚೀನಾ ನಿರ್ಮಿತ ಎಫ್-7 ಫೈಟರ್ ಜೆಟ್ ಮೈಲ್‌ಸ್ಟೋನ್ ಕಾಲೇಜು ಬಳಿ ಪತನಗೊಂಡಿದೆ. ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇತರ ಹಲವರು ಗಾಯಗೊಂಡಿದ್ದಾರೆ.
ಬಾಂಗ್ಲಾದೇಶ ವಾಯುಪಡೆಯ ತರಬೇತಿ ವಿಮಾನವು ಢಾಕಾದ ಉತ್ತರ ಭಾಗದಲ್ಲಿರುವ ಶಾಲಾ ಆವರಣಕ್ಕೆ ಅಪ್ಪಳಿಸಿದೆ. ಅಪಘಾತಕ್ಕೀಡಾದ ಎಫ್-7 ಬಿಜಿಐ ವಿಮಾನ ವಾಯುಪಡೆಗೆ ಸೇರಿದೆ ಎಂದು ಬಾಂಗ್ಲಾದೇಶ ಸೇನೆಯ ಸಾರ್ವಜನಿಕ ಸಂಪರ್ಕ ಕಚೇರಿ ಹೇಳಿಕೆಯಲ್ಲಿ ದೃಢಪಡಿಸಿದೆ. ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿ ಲಿಮಾ ಖಾನ್ ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲಾಗಿಲ್ಲ.

0 Comments
Await For Moderation ; Normally we don't allow Comments