ನವದೆಹಲಿ: ದೀಪಾವಳಿ ಮತ್ತು ಛಠ್ ಪೂಜೆ ಆಚರಣೆಯ ಸಮಯದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು, ವಿವಿಧ ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದೆಹಲಿ ಮತ್ತು ಮುಂಬೈ ನಿಲ್ದಾಣಗಳು ಸೇರಿದಂತೆ ದೇಶದ 15 ಪ್ರಮುಖ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಅಕ್ಟೋಬರ್ 28 ರವರೆಗೆ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ರೈಲ್ವೆ ಘೋಷಿಸಿದೆ. ಏತನ್ಮಧ್ಯೆ, ಸಹಾಯದ ಅಗತ್ಯವಿರುವ ವೃದ್ಧರು, ರೋಗಿಗಳು, ಮಕ್ಕಳು ಮತ್ತು ಮಹಿಳಾ ಪ್ರಯಾಣಿಕರಿಗೆ ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಒದಗಿಸಲಾಗುವುದು ಎಂದು ರೈಲ್ವೆ ಘೋಷಿಸಿದೆ.
ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿರುವ ನಿಲ್ದಾಣಗಳು:
ನವದೆಹಲಿ ರೈಲು ನಿಲ್ದಾಣ
ದೆಹಲಿ ರೈಲು ನಿಲ್ದಾಣ
ಹಜರತ್ ನಿಜಾಮುದ್ದೀನ್
ಆನಂದ್ ವಿಹಾರ್ ಟರ್ಮಿನಲ್
ಘಾಜಿಯಾಬಾದ್
ಬಾಂದ್ರಾ ಟರ್ಮಿನಸ್
ವಾಪಿ
ಸೂರತ್
ಉಧ್ನಾ
ಛತ್ರಪತಿ ಶಿವಾಜಿ ಮಹಾರಾಜರ ಟರ್ಮಿನಸ್ (CSMT)
ದಾದರ್
ಲೋಕಮಾನ್ಯ ತಿಲಕ್ ಟರ್ಮಿನಸ್ (LTT)
ಥಾಣೆ
ಕಲ್ಯಾಣ್
ಪನ್ವೇಲ್

0 Comments
Await For Moderation ; Normally we don't allow Comments