ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ (Rakshak Bullet) ಅಪ್ಪನ ನೆನೆದು ಕಣೀರು ಹಾಕಿದ್ದಾರೆ. ಅಪ್ಪ ಇದ್ದಿದ್ದರೆ ತುಂಬಾನೆ ಖುಷಿಪಡ್ತಾ ಇದ್ದರು. ಆದರೆ, ಅಪ್ಪ ಈಗೀಲ್ಲ ಅನ್ನೋದನ್ನೆ ಹೇಳಿಕೊಂಡು ಕಣ್ಣೀರಾಗಿದ್ದಾರೆ. ಆದರೆ, ಅದಕ್ಕೂ ಮೊದಲು ರಕ್ಷಕ್ ಬುಲೆಟ್ ವೇದಿಕೆ ಮೇಲೆ ರಚಿತಾ ರಾಮ್ (Rachita Ram) ಮತ್ತು ದರ್ಶನ್ ನಟನೆಯ ಬುಲ್ ಬುಲ್ ಚಿತ್ರದ ಒಂದು ದೃಶ್ಯವನ್ನ ರೀ-ಕ್ರಿಯೆಟ್ ಮಾಡಿದ್ದಾರೆ. ಭರ್ಜರಿ ಬ್ಯಾಚುಲರ್ ಸಾಥಿ ರಮೋಲಾ ಇಲ್ಲಿ ರಚಿತಾ ರಾಮ್ ಆಗಿದ್ದಾರೆ. ದರ್ಶನ್ ಪಾತ್ರವನ್ನ ಇಲ್ಲಿ ರಕ್ಷಕ್ ಬುಲೆಟ್ (Rakshak Bullet) ಮಾಡಿದ್ದಾರೆ. ಇವರ ಈ ಒಂದು ಆ್ಯಕ್ಟ್ ನೋಡಿ ರಚಿತಾ ರಾಮ್ ತುಂಬಾನೆ ಖುಷಿಪಟ್ಟಿದ್ದಾರೆ. ಈ ಒಂದು ಸ್ಪೆಷಲ್ ರೀ-ಕ್ರಿಯೇಷನ್ (Re-Creation) ಝಲಕ್ ಪ್ರೋಮೋದಲ್ಲಿಯೇ ರಿವೀಲ್ ಆಗಿದೆ. ಈ ಒಂದು ಪ್ರೋಮೋದ ಸ್ಟೋರಿ ಇಲ್ಲಿದೆ ಓದಿ.
ಅಪ್ಪನ ನೆನೆದ ಕಣ್ಣೀರಾದ ರಕ್ಷಕ್ ಬುಲೆಟ್
ರಕ್ಷಕ್ ಬುಲೆಟ್ ಮತ್ತು ರಮೋಲಾ ಸಖತ್ ಜೋಡಿ ನೋಡಿ. ಭರ್ಜರಿ ಬ್ಯಾಚುಲರ್ ಶೋದಲ್ಲಿ ಈ ಜೋಡಿ ಮೋಡಿ ಮಾಡ್ತಿದೆ. ಬುಲ್ ಬುಲ್ ಚಿತ್ರದ ದೃಶ್ಯವೊಂದನ್ನ ಇಲ್ಲಿ ರೀ-ಕ್ರಿಯೆಟ್ ಮಾಡಿದ್ದಾರೆ. ರಚಿತಾ ರಾಮ್ ಆಗಿಯೇ ರಮೋಲಾ ಇಲ್ಲಿದ್ದಾರೆ. ದಾಸ ದರ್ಶನ್ ಪಾತ್ರದಲ್ಲಿ ರಕ್ಷಕ್ ಬುಲೆಟ್ ಇದ್ದಾರೆ.

0 Comments
Await For Moderation ; Normally we don't allow Comments