ಅಸ್ಸಾಂ: ಲವ್ ಜಿಹಾದ್ (Love Jihad) ಬಗ್ಗೆ ಆಗಾಗ ಚರ್ಚೆ ನಡೆಯುತ್ತಿರೋ ಹೊತ್ತಲ್ಲೇ, ಮಹಿಳೆಯೊಬ್ಬರು ಮುಸ್ಲಿಂ ಧರ್ಮ ತೊರೆದು, ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ತಾನು ಪ್ರೀತಿಸಿ ಮದುವೆಯಾದ ಗಂಡನ ವಿರುದ್ಧ ಸಿಡಿದೆದ್ದ ಮಹಿಳೆ, ಮಗು ಜೊತೆ ಮುಸ್ಲಿಂ ಧರ್ಮ ತೊರೆದು, ಹಿಂದೂ ಧರ್ಮ ಸ್ವೀಕರಿಸಿದ್ದಾಳೆ. ಅಸ್ಸಾಂನ ಶ್ರೀಭೂಮಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮದುವೆಯಾಗಿ ಒಂದು ಮಗುವಾದ ನಂತರ ಗಂಡನ ನಿಜವಾದ ಧರ್ಮ ಪತ್ನಿಗೆ ಗೊತ್ತಾಗಿದೆ. ಇದರಿಂದ ಸಿಟ್ಟಿಗೆದ್ದ ಪತ್ನಿ, ಗಂಡನನ್ನೇ ತೊರೆದು ತವರು ಮನೆ ಸೇರಿದ್ದಾಳೆ. ಅಲ್ಲದೇ ತಾನು ಹಿಂದೂ ಧರ್ಮಕ್ಕೆ (Hindu Religion) ಮತಾಂತರಗೊಂಡಿದ್ದಾಳೆ (Conversion).
ಶ್ರೀಭೂಮಿ ಜಿಲ್ಲೆಯ ಪಥರ್ಕಂಡಿ ಕ್ಷೇತ್ರದ ಬಾಜಾ ರಿಶ್ಡಾ ಪ್ರದೇಶದ ಚಂದ್ರಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಡಕಟ್ಟು ಮಹಿಳೆಯೊಬ್ಬಳು ಮದುವೆಯಾಗಿ ಒಂದು ಮಗುವಿಗೆ ಜನ್ಮ ನೀಡಿದ ನಂತರ ತನ್ನ ಗಂಡನ ನಿಜವಾದ ಧರ್ಮ ಗೊತ್ತಾಗಿದೆ.
ರಿಂಗಕೇಟಿಂಗ್ ಚಾರೈ ಎಂಬ ಬುಡಕಟ್ಟು ಮಹಿಳೆ ಫಾದಿಲ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ಆದರೆ ಫಾದಿಲ್ ಮುಸ್ಲಿಂ ಯುವಕ ಎಂದು ಗೊತ್ತಿರಲಿಲ್ಲ. ಮದುವೆ ಮಾಡಿಕೊಂಡ ನಂತರ ದಂಪತಿ ಬೆಂಗಳೂರಿಗೆ ಹೋಗಿ ನೆಲೆಸಿದ್ದರು. ಸುಖವಾಗಿ ಸಂಸಾರ ಮಾಡಿಕೊಂಡಿದ್ದ ದಂಪತಿಗೆ ಒಂದು ಮಗು ಕೂಡ ಜನಿಸಿತ್ತು. ಮಗುವಾದ ನಂತರ ಫಾದಿಲ್ ಮುಸ್ಲಿಂ ಎಂದು ಪತ್ನಿಗೆ ಗೊತ್ತಾಗಿದೆ.

0 Comments
Await For Moderation ; Normally we don't allow Comments