Header Ads Widget

Responsive Advertisement

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್​ ಆಗಿದ್ಯಾ? KSEAB ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಸ್ಪಷ್ಟನೆ



 ಬೆಂಗಳೂರು: ಫೆಬ್ರವರಿ 28 ಶನಿವಾರದಿಂದ ದ್ವಿತೀಯ ಪಿಯುಸಿ (Second PUC Exam) ಪರೀಕ್ಷೆ ಶುರುವಾಗ್ತಿದೆ. ಪರೀಕ್ಷೆಗೆ 2 ದಿನಗಳಿರುವಾಗಲೇ ಲೀಕಾಸುರರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲು ಮುಂದಾಗಿದ್ದಾರೆ. 100 ರೂಪಾಯಿ ಕೊಟ್ರೆ ಸಾಕು ದ್ವಿತೀಯ ಪಿಯುಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ (Question Paper) ಕೊಡುವುದಾಗಿ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಮೇತ ಪೋಸ್ಟ್​​ಗಳನ್ನ ಹರಿಬಿಡ್ತಿದ್ದಾರೆ. ನಿಜಕ್ಕೂ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿದ್ಯಾ? ಈ ಬಗ್ಗೆ KSEAB ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಕೊಟ್ಟ  ಸ್ಪಷ್ಟನೆ ಏನು ಗೊತ್ತಾ?

ಪ್ರಶ್ನೆ ಪತ್ರಿಕೆಗಳ ವಿಡಿಯೋ​ ಹರಿಬಿಟ್ಟ ಕಿಡಿಗೇಡಿಗಳು

ವರ್ಷ ಪೂರ್ತಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಕೆಲಸ ನಡೆಯುತ್ತಿದ್ದು, ಕಿಡಿಗೇಡಿಗಳು ವಿದ್ಯಾರ್ಥಿಗಳ ದಾರಿ ತಪ್ಪಿಸುತ್ತಿದ್ದಾರೆ ಎಂದು ಪೋಷಕರು ಕಿಡಿಕಾರುತ್ತಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಶ್ನೆ ಪತ್ನಿಕೆ ಎಂಬ ವಿಡಿಯೋ ವೈರಲ್​ ಆಗ್ತಿದೆ.

ವಿಡಿಯೋ ಹರಿಬಿಟ್ಟ ಲೀಕಾಸುರರು

ಕನ್ನಡ, ಇಂಗ್ಲಿಷ್, ಗಣಿತ ಪರೀಕ್ಷೆ ಪ್ರಶ್ನೆ ಪತ್ರಿಕೆ ಎನ್ನಲಾಗ್ತಿರೋ ವಿಡಿಯೋ ತುಣುಕು ರಿಲೀಸ್ ಆಗಿದ್ದು, ಕೆಲ ಪ್ರಶ್ನೆ ಪತ್ರಿಕೆಗಳ ಬ್ಲರ್ ಇಮೇಜ್ ಹರಿದಾಡ್ತಿದೆ. ವಿದ್ಯಾರ್ಥಿಗಳಿಗೆ ಗೊಂದಲ ಮೂಡಿಸುತ್ತಿರುವ ಸೋಶಿಯಲ್ ಮೀಡಿಯಾ ಅಕೌಂಟ್ ಪರಿಶೀಲನೆಗೆ ಪರೀಕ್ಷಾ ಮಂಡಳಿ ಮುಂದಾಗಿದೆ. ಈ ಕುರಿತು ಸೈಬರ್ ಪೊಲೀಸರಿಗೆ ದೂರು ನೀಡಲು ಪರೀಕ್ಷಾ ಮಂಡಳಿ ಮುಂದಾಗಿದೆ.

Post a Comment

0 Comments