ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೆ ಕಸದ ಸಮಸ್ಯೆ ತಲೆದೂರಿದೆ. ದೊಡ್ಡಬಳ್ಳಾಪುರ (Doddaballapura) ತಾಲ್ಲೂಕಿನ ದೊಡ್ಡ ಮಂಕಲಾಳ ಬಳಿ ಹೆಚ್ಚುವರಿ ಕಸದ ಲಾರಿ (Garbage Lorry) ಕಳುಹಿಸದಕ್ಕಾಗಿ ಗ್ರಾಮಸ್ಥರು ಮತ್ತು ಸ್ಥಳೀಯ ಶಾಸಕ ಲಾರಿಗಳ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆ ಬಿಜೆಪಿ ಶಾಸಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಎಲ್ಲಾ ಶಾಸಕರು ಬ್ಲ್ಯಾಕ್‌ಮೇಲ್ (Blackmail) ಮಾಡ್ತಿದ್ದಾರೆ, ಗೌರವದಿಂದ ಇದ್ರೆ ಸರಿ, ಇಲ್ಲ ಅಂದ್ರೆ ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಹಾಕಿಸುತ್ತೇನೆ ಎಂದಿದ್ದಾರೆ.
ಬಿಜೆಪಿ ಆಫೀಸ್‌ಗೆ ಕಸ ಕಳುಹಿಸುತ್ತೇನೆ
ದೊಡ್ಡಬಳ್ಳಾಪುರ ಘನತ್ಯಾಜ್ಯ ವಿಲೇವಾರಿ ವಿವಾದ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಶಾಸಕರ ವಿರುದ್ಧ ಕಿಡಿಕಾರಿರುವ ಡಿಸಿಎಂ ಡಿಕೆ ಶಿವಕುಮಾರ್, ಅವರ ಮನೆ ಮುಂದೆ ಇಲ್ಲವೇ ಬಿಜೆಪಿ ಆಫೀಸ್‌ಗೆ ಕಸ ಕಳುಹಿಸುತ್ತೇನೆ, ಕಸ ಇನ್ನೆಲ್ಲಿಗೆ ಹಾಕೋದು, ಅಶೋಕ್ ಮನೆಗೆ ಕಳುಹಿಸಬೇಕಾ? ವಿಜಯೇಂದ್ರ ಮನೆಗೆ ಕಳಿಸ್ಬೇಕಾ? ಎಂದು ಪ್ರಶ್ನಿಸಿದ್ದಾರೆ.

0 Comments
Await For Moderation ; Normally we don't allow Comments