Header Ads Widget

Responsive Advertisement

ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾದ ಮಂಡ್ಯದ ಹುಡುಗಿ; ಬಡತನವಿದ್ದರೂ ಗೆದ್ದು ಬೀಗಿದ ದೀಪಿಕಾ

 


ಮೈಸೂರು: ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ, ಮಂಡ್ಯ ಜಿಲ್ಲೆಯ ಕೆರಗೋಡಿನ ಗ್ರಾಮೀಣ ಪ್ರತಿಭೆ ಎನ್. ದೀಪಿಕಾ (N. Deepika) ಸಿವಿಲ್‌ ನ್ಯಾಯಾಧೀಶರ ಹುದ್ದೆಗೆ (Civil Judge) ಆಯ್ಕೆಯಾಗಿದ್ದಾರೆ. ಅವರು, ಕೃಷಿ ಕಾರ್ಮಿಕ ದಂಪತಿ ನಾಗಣ್ಣ ಮತ್ತು ಸಾಕಮ್ಮ ಅವರ ಪುತ್ರಿಯಾಗಿದ್ದಾರೆ. 2025ರ ಸಿವಿಲ್‌ ನ್ಯಾಯಾಧೀಶ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾದ 83 ಅಭ್ಯರ್ಥಿಗಳಲ್ಲಿ ದೀಪಿಕಾ 32ನೇ ರ‍್ಯಾಂಕ್ ಪಡೆದಿದ್ದಾರೆ.


ಮಗಳ ಸಾಧನೆಗೆ ಪೋಷಕರ ಸಂಭ್ರಮ


ದೀಪಿಕಾ ತಮ್ಮ 5ನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದು, ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಕಾನೂನು ಸಲಹಾ ರಕ್ಷಣಾ ಅಭಿರಕ್ಷಕರಾಗಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಆನಂದ್ ಮಾರ್ಗದರ್ಶನದಲ್ಲಿ ತಯಾರಿ ನಡೆಸಿದ್ದರು. ಅವರ ಸಾಧನೆಗೆ ಪೋಷಕರು ಹಾಗೂ ಕಾಲೇಜಿನ ಅಧ್ಯಾಪಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

Post a Comment

0 Comments