ಬೆಂಗಳೂರು (ಫೆ.23): ಶೇಷಾದ್ರಿಪುರಂ (Seshadripuram) ಬಳಿ ಇರುವ ಕೆನರಾ ಬ್ಯಾಂಕ್ನಲ್ಲಿ ಕಳ್ಳತನಕ್ಕೆ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಖದೀಮರು ಕೆನರಾ ಬ್ಯಾಂಕಿನ (Canara Bank) ಒಳಗೆ ನುಗ್ಗಿದ್ದು, ಸೈರನ್ ಮೊಳಗುತ್ತಿದ್ದಂತೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಶೇಷಾದ್ರಿಪುರಂ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಿಲ್ ಕಟ್ ಮಾಡಿ ಒಳನುಗ್ಗಿದ ಖದೀಮರು
ಇಂದು (ಫೆ.23) ಬೆಳಗಿನ ಜಾವ ಶೇಷಾದ್ರಿಪುರಂ ಬಳಿ ಇರೋ ಕೆನರಾ ಬ್ಯಾಂಕ್ಗೆ ಕನ್ನ ಹಾಕಲು ಕದೀಮರು ಯತ್ನಿಸಿದ್ದಾರೆ. ಬ್ಯಾಂಕ್ ಹಿಂಬದಿ ಇದ್ದ ಗ್ರಿಲ್ ಕಟ್ ಮಾಡಿ ಒಳ ನುಗ್ಗಿರುವ ಕಳ್ಳರು ಎಲ್ಲೆಡೆ ಓಡಾಡಿದ್ದಾರೆ. ಬಳಿಕ ಸ್ಟ್ರಾಂಗ್ ರೂಮ್ ಬಳಿ ಹೋಗಿ ವೈರ್ ಕಟ್ ಮಾಡಿದ್ದಾರೆ.
ಸೈರನ್ ಸದ್ದು ಕೇಳಿ ಕದೀಮರು ಎಸ್ಕೇಪ್
ಸ್ಟ್ರಾಂಗ್ ರೂಮ್ ಬಳಿ ವೈರ್ ಕಟ್ ಮಾಡ್ತಿದ್ದಂತೆ ಸೈರನ್ ಮೊಳಗಿದೆ. ಸೈರನ್ ಸದ್ದು ಕೇಳಿ ಗಾಬರಿಯಾದ ಕದೀಮರು ಸ್ಥಳದಿಂದಲೇ ಎಸ್ಕೇಪ್ ಆಗಿದ್ದಾರೆ ಎನ್ನಲಾಗ್ತಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬ್ಯಾಂಕ್ ಹಿಂಬದಿ ಇದ್ದ ಗ್ರಿಲ್ ಕಟ್ ಮಾಡಿ ಕಳ್ಳರು ಒಳಗೆ ನುಗ್ಗಿದ್ದಾರೆ ಎಂದು ವರದಿ ಆಗಿದೆ.

0 Comments
Await For Moderation ; Normally we don't allow Comments