Header Ads Widget

Responsive Advertisement

ಕ್ಯಾಲಿಫೋರ್ನಿಯಾದಲ್ಲಿ ಮೃತಪಟ್ಟ ಸಾಕೇತ್ ಸಾವಿನ ಸುತ್ತ ಹಲವು ಅನುಮಾನ:​ ಮಗ ಸತ್ತಿಲ್ಲ ಅಂತಿರೋ ಪೋಷಕರು!

 


ಕರ್ನಾಟಕದ ತುಮಕೂರು ಮೂಲದ 22 ವರ್ಷದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (Saketh Srinivasaiah) ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ (California) ನಾಪತ್ತೆಯಾಗಿ, ನಂತರ ಶವವಾಗಿ ಪತ್ತೆಯಾಗಿದ್ದರು. ನಾಪತ್ತೆಯಾಗಿ ಸುಮಾರು 6 ದಿನಗಳ ನಂತರ ಸಾಕೇತ್​ ಮೃತಪಟ್ಟಿದ್ದಾರೆ (Death) ಎಂದು ಅಧಿಕಾರಿಗಳು ಘೋಷಣೆ ಮಾಡಿದ್ದರು. ಈ ದುಃಖದ ಸುದ್ದಿಯೊಂದಿಗೆ ಕುಟುಂಬ ಮತ್ತು ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಆದರೆ ಸಾಕೇತ್ ಅವರ ಪೋಷಕರು ಇನ್ನೂ ಸಾವನ್ನು ಒಪ್ಪಿಕೊಂಡಿಲ್ಲ.

ಸಾಕೇತ್​ ಶ್ರೀನಿವಾಸಯ್ಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೋಷಕರು, ಅಧಿಕೃತವಾಗಿ ನಮಗೆ ಯಾರೂ ಸ್ಪಷ್ಟವಾಗಿ ಏನೂ ಹೇಳಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಅಲ್ಲದೇ ಸುಮಾರು ಎರಡು ದಿನಗಳಿಂದಲೂ ಎಮರ್ಜೆನ್ಸಿ ವೀಸಾಗಾಗಿ ಶತ ಪ್ರಯತ್ನ ನಡಸುತ್ತಿದ್ದಾರೆ.

ಸಾಕೇತ್​ ಸತ್ತಿಲ್ಲ ಅಂತಿರೋ ಪೋಷಕರು

ಕ್ಯಾಲಿಫೋರ್ನಿಯಾದಲ್ಲಿ ಮೃತಪಟ್ಟ ಸಾಕೇತ್​ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದೆ. ಸಾಕೇತ್ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದರು. ಫೆಬ್ರವರಿ 9ರಿಂದ ಅವರು ಕಾಣೆಯಾಗಿದ್ದರು. ಕೊನೆಯ ಬಾರಿಗೆ ಟಿಲ್ಡೆನ್ ರೀಜನಲ್ ಪಾರ್ಕ್‌ನ ಸರೋವರದ ಬಳಿ ಕಂಡುಬಂದಿದ್ದರು ಎಂದು ಮಾಹಿತಿ ಇದೆ. ಆರು ದಿನಗಳ ನಂತರ ಅವರ ಮೃತದೇಹ ಪತ್ತೆಯಾಗಿದೆ ಎಂದು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ. ಭಾರತೀಯ ರಾಯಭಾರಿ ಕಚೇರಿ ಈ ಮಾಹಿತಿಯನ್ನು ಭಾನುವಾರ ಘೋಷಿಸಿದೆ.

Post a Comment

0 Comments