Header Ads Widget

Responsive Advertisement

ಕಾಫಿನಾಡಲ್ಲಿ 8 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ!

 



ಚಿಕ್ಕಮಗಳೂರು: ಹಾವುಗಳನ್ನ(Snakes) ಕಂಡ್ರೆ ಎಲ್ಲರಿಗೂ ಭಯ ಆಗೋದಂತೂ ನಿಜ. ಅದರಲ್ಲೂ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ವಿಷಕಾರಿ ಹಾವನ್ನ ಕಂಡ್ರೆ ಯಾರಿಗೆ ತಾನೇ ಭಯ ಆಗಲ್ಲ ಹೇಳಿ ಇಲ್ಲೊಂದು ಭಯಾನಕ ಕಾಳಿಂಗ ಸರ್ಪವನ್ನ(Black Cobra) ರಾತ್ರಿ ಸೆರೆ ಹಿಡಿದಿದ್ದಾರೆ. ಹಾಗಾದ್ರೆ ಈ ಕಾಳಿಂಗ ಸರ್ಪ ಕಾಣಿಸಿದ್ದು ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ...

ಮೂಡಿಗೆರೆಯ ಕೂವೆ - ಕಲ್ಮನೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ

ಮಲೆನಾಡಲ್ಲಿ ಹಾವು ಕಾಣಿಸೋದು ಸಹಜ ಬಿಡಿ. ಅದರಲ್ಲಿ ವಿಶೇಷ ಏನಿದೆ ಅಂತೀರಾ? ಹೌದು ಸ್ವಾಮಿ, ಮಲೆನಾಡಿಗರಿಗೆ ಹಾವುಗಳು ವಿಶೇಷವೇನಲ್ಲ. ಆದ್ರೆ ಈ ಸರ್ಪಗಳು ನಮ್ಮ ಮನೆಗೆ ನಮ್ಮ ಅಂಗಳಕ್ಕೆ ಬಂದಾಗಲೇ ನಮಗೂ ಭಯ ಆಗೋದು. ಅದರಲ್ಲೂ ವಿಶ್ವದಲ್ಲೇ ಅತ್ಯಂತ ಭಯಾನಕ ವಿಷಕಾರಿ ಹಾವು ನಮ್ಮ ಮನೆಗೆ ಬಂದಿದೆ ಅಂದ್ರೆ ಯಾರಿಗೆ ತಾನೇ ಭಯ ಆಗಲ್ಲ. ಹೌದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕೂವೆ - ಕಲ್ಮನೆಯ ಗ್ರಾಮದ ರೈತನ ಮನೆಯಂಗಳಕ್ಕೆ ಭಾರೀ ಗಾತ್ರದ ಕಾಳಿಂಗ ಸರ್ಪ ಎಂಟ್ರಿ ಕೊಟ್ಟಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಸುಮಾರು 8 ರಿಂದ 10 ಅಡಿ ಉದ್ದವಿದ್ದ ಕಾಳಿಂಗ ಸರ್ಪ ನೋಡಿ ಭಯಭೀತರಾಗಿದ್ದರು.

Post a Comment

0 Comments